ಆಚಾರ್ಯ ಮಧ್ವರು ಸರ್ವಮೂಲ ಗ್ರಂಥಗಳನ್ನು ಸಂಸ್ಕೃತ ಭಾಷೆಯಲ್ಲಿ ರಚಿಸಿದರು. ಪಂಡಿತರಿಗೆ, ಜ್ಞಾನಿಗಳಿಗೆ, ವಿದ್ವಾಂಸರಿಗೆ, ಸಂಸ್ಕೃತಭಾಷೆ ಬಲ್ಲವರಿಗೆ ಬಹಳ ಪ್ರಯೋಜನವಾಯಿತು. ಜನಸಾಮಾನ್ಯರಿಗೆ, ಪಾಮರರಿಗೆ, ಸಂಸ್ಕೃತಭಾಷೆ ಅರಿಯದವರಿಗೆ ಇದು ಕಬ್ಬಿಣದ ಕಡಲೆ ಮತ್ತು ಮರೀಚಿಕೆಯಾಗಿತ್ತು. ಪರಮಪೂಜ್ಯ ಶ್ರೀವಿಶ್ವೇಶತೀರ್ಥ ಶ್ರೀಪಾದರು ಈ ಸಮಸ್ಯೆಗೆ ಪರಿಹಾರವಾಗಬೇಕಾದರೆ ಸರ್ವಮೂಲ ಗ್ರಂಥಗಳು ಕನ್ನಡದಲ್ಲಿ ಅರ್ಥ, ಟಿಪ್ಪಣಿಗಳ ಸಹಿತ ಅನುವಾದಗೊಳ್ಳಬೇಕೆಂದು ತೀರ್ಮಾನಿಸಿದರು. ನಾಡಿನ ಹೆಸರಾಂತ ವಿದ್ವಾಂಸರಾದ ಶ್ರೀ ಹಯವದನ ಪುರಾಣಿಕರು, ಶ್ರೀ ಅಧ್ಯಾಪಾಡಿ ಹರಿದಾಸ್ ಭಟ್, ಆನಂದತೀರ್ಥ ನಾಗಸಂಪಿಗೆ, ಶ್ರೀ ವೆಂಕಟೇಶ ಬಾಯರಿ, ಶ್ರೀ ಸಿ.ಹೆಚ್. ಬದರೀಆಚಾರ್ಯ, ಶ್ರೀ ಧನಂಜಯಾಚಾರ್ಯ ಮತ್ತು ಸ್ವತಃ ಶ್ರೀಗಳ ಗ್ರಂಥಗಳ ಕನ್ನಡ ಅನುವಾದವನ್ನು ಮಾಡಿದ್ದಾರೆ. ಸನ್ 1985ರಲ್ಲಿ ಈ ಬೃಹತ್ ಅನುವಾದ ಯೋಜನೆ ಆರಂಭಗೊಂಡು 2019 ಡಿಸೆಂಬರ್ನಲ್ಲಿ ಪೂರ್ಣಗೊಂಡಿತು. ಅನುವಾದ ಕಾರ್ಯದಲ್ಲಿ ಶ್ರೀಯುತ ಹಯವದನ ಪುರಾಣಿಕರದ್ದೇ ಸಿಂಹಪಾಲು. ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ಪ್ರಕಾಶನಗೊಂಡಿರುವ ಈ ಗ್ರಂಥಗಳು ತನ್ನದೇ ಆದ ಮೌಲ್ಯಗಳಿಂದ ಜಿಜ್ಞಾಸುಗಳ ಪ್ರಶಂಸೆಗೆ ಪಾತ್ರವಾಗಿವೆ. ಸರ್ವಮೂಲ ಗ್ರಂಥಗಳನ್ನು ಹೊರತುಪಡಿಸಿ ಲಕ್ಷ್ಮೀಶೋಭಾನೆ, ರಾಮಾಯಣಸಾರ, ಮಹಾಭಾರತಸಾರ, ಹರಿಕಥಾಮೃತಸಾರ, ಆಂಗ್ಲಭಾಷೆಯಲ್ಲಿ philosophy of Madhwacharya, ಹಿಂದಿಭಾಷೆಯಲ್ಲಿ ರಾಮಾಯಣಸಾರ, ಅನೇಕ ಇತರೆ ಗ್ರಂಥಗಳನ್ನು ಕೂಡಾ ಪ್ರಕಟಿಸಲಾಗಿದೆ.
eBooks · Article 7 of 9
ಸರ್ವಮೂಲ ಗ್ರಂಥಗಳ (ಕನ್ನಡೀಕರಣ) ಕನ್ನಡ ಅನುವಾದ ಯೋಜನೆ
The Sarvamula translation project. Compiled by Sri Shreepada M. Singanamalli, General Secretary of ABMMM.
