ಅಖಿಲ ಭಾರತ ಮಾಧ್ವ ಮಹಾಮಂಡಲದಿಂದ ಪ್ರತಿ ತಿಂಗಳು ವಿಚಾರಸಂಕಿರಣ ಕಾರ್ಯಕ್ರಮವನ್ನು ನಡೆಸುವ ಪದ್ಧತಿ ಜಾರಿಯಲ್ಲಿ ಬಂದಿದೆ. ಸುಮಾರು ಹತ್ತು ವರ್ಷಕ್ಕೂ ಹೆಚ್ಚು ಡಾ. ಸತ್ಯನಾರಾಯಣಾಚಾರ್ಯ ಇವರು ಸರ್ವಮೂಲ ಗ್ರಂಥಗಳ ವಿಚಾರಸಂಕಿರಣವನ್ನು ನಡೆಸಿಕೊಟ್ಟಿದ್ದಾರೆ.

ಪ್ರಸ್ತುತ ಎರಡು ವರ್ಷಗಳಿಂದ ಡಾ. ಸತ್ಯನಾರಾಯಣಾಚಾರ್ಯರವರು ಶ್ರೀಗುರುಸಾರ್ವಭೌಮ ವಾದಿರಾಜವಿರಚಿತ ಯುಕ್ತಿಮಲ್ಲಿಕಾ ಉಪನ್ಯಾಸವನ್ನು ಮಾಡುತ್ತಿದ್ದಾರೆ. ವಿದ್ವಾಂಸರಾದ ಶ್ರೀ ಅಧ್ಯಾಪಾಡಿ ಹರಿದಾಸ್ ಭಟ್ ಇವರು ಮಧ್ವಸಿದ್ಧಾಂತದ ಪ್ರಮೇಯ ಭಾಗಗಳ ಉಪನ್ಯಾಸವನ್ನು ಮಾಡುತ್ತಿದ್ದಾರೆ. ಪ್ರತಿವರ್ಷ ಸಾಮೂಹಿಕ ಉಚಿತ ಉಪನಯನವನ್ನು, ಧಾರ್ಮಿಕ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.