ಪರಮಪೂಜ್ಯ ಶ್ರೀಶ್ರೀ ವಿಶ್ವಪ್ರಸನ್ನತೀರ್ಥರು ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರ ಮಾರ್ಗದರ್ಶನ ನಮಗೆಲ್ಲ ದಾರಿದೀಪ. ಗುರುಗಳು ನಿರ್ಮಿಸಿದ ಕೆಲವು ವಿದ್ಯಾರ್ಥಿನಿಲಯಗಳು ಬಹಳ ಶಿಥಿಲಗೊಂಡಿರುವ ಕಾರಣ, ವಿಜಯಪುರ, ಬೆಳಗಾವಿ, ರಾಯಚೂರು ನಿಲಯಗಳ ಪುನರ್ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದಾರೆ. ಹಾಗೆ ಹುಬ್ಬಳ್ಳಿಯಲ್ಲಿರುವ ಮಂಡಲದ ಜಾಗದಲ್ಲಿ ಉತ್ತರಕರ್ನಾಟಕದ ಜನರಿಗೆ ಅಪರಕರ್ಮಕ್ಕೆ ಅನುಕೂಲವಾಗಲೆಂದು ಬೆಂಗಳೂರಿನಲ್ಲಿರುವ ಜನಾರ್ದನಧಾಮದ ಮಾದರಿಯಲ್ಲಿ 4500 ಚದರಅಡಿಯಲ್ಲಿ ಕಟ್ಟಡದ ನೀಲನಕ್ಷೆ ಸಿದ್ಧವಾಗಿದೆ. ಈ ಎಲ್ಲ ಅಭಿವೃದ್ಧಿ ಕಾಮಗಾರಿ ಕೆಲಸಗಳನ್ನು ಸಂಪೂರ್ಣಗೊಳಿಸಿ ಯತಿಕುಲಚಕ್ರವರ್ತಿ ಶ್ರೀವಿಶ್ವೇಶತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವದಲ್ಲಿ ಗುರುಗಳ ಅಂತರ್ಯಾಮಿ ಆದ ರಾಮವಿಟ್ಠಲದೇವರಿಗೆ ಸಮರ್ಪಿಸಲಿದ್ದಾರೆ.

ಇಂತಹ ಗುರುಗಳ ಕೃಪಾಶೀರ್ವಾದ ಮಂಡಲದ ಮೇಲೆ ಸದಾ ಇರಲೆಂದು ಪ್ರಾರ್ಥಿಸುತ್ತಾ ಈ ಲೇಖನವನ್ನು ಮುಗಿಸುತ್ತಿದ್ದೇನೆ. ಅವಕಾಶ ಮಾಡಿಕೊಟ್ಟ ಡಾ. ಆನಂದತೀರ್ಥಾಚಾರ್ಯ ನಾಗಸಂಪಿಗೆ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ನಾರಾಯಣ ಭಟ್, ರಾಮಕುಂಜ ಇವರುಗಳಿಗೆ ನನ್ನ ಅನಂತಪ್ರಣಾಮಗಳು. ವಿಷಯ ಸಂಗ್ರಹಕಾಲದಲ್ಲಿ ಪೂರ್ಣಮಾಹಿತಿಗಳು ದೊರೆತಿಲ್ಲ. ದಯವಿಟ್ಟು ಕ್ಷಮಿಸಿ. ತಮಗೆ ಸೂಕ್ತ ಮಾಹಿತಿಗಳು ದೊರೆತರೆ ನನಗೆ ತಿಳಿಸಬೇಕಾಗಿ ವಿನಂತಿ.

ದಿನಾಂಕ 25/9/26 · ಸಂಗ್ರಹ: ಶ್ರೀಪಾದ ಮ. ಸಿಂಗನಮಲ್ಲಿ, ಪ್ರಧಾನ ಕಾರ್ಯದರ್ಶಿ, ಅ.ಭಾ.ಮಾ.ಮ.

ಅಖಿಲ ಭಾರತ ಮಾಧ್ವ ಮಹಾಮಂಡಲ, ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಬೆಂಗಳೂರು–560070